SSP ವಿದ್ಯಾರ್ಥಿವೇತನ 2026: ಎಲ್ಲಾ ತರಗತಿಯ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ, ಕೊನೆಯ ದಿನಾಂಕ ಆಗಸ್ಟ್ 31
ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿಸಲು ರಾಜ್ಯ ಸರ್ಕಾರ ವಿವಿಧ ವಿದ್ಯಾರ್ಥಿವೇತನ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.
ಪ್ರಸ್ತುತ SSP ತಂತ್ರಾಂಶದ ಮೂಲಕ ಹಲವು ಇಲಾಖೆಗಳ ವಿದ್ಯಾರ್ಥಿವೇತನಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಒಂದೇ ವೆಬ್ಸೈಟ್ ಮೂಲಕ ಎಲ್ಲಾ ಇಲಾಖೆ ಮತ್ತು ತರಗತಿಗಳ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಅನುಕೂಲ ಒದಗಿಸಲಾಗಿದೆ.

SSP Scholarship Online Applicationಗೆ ಕೊನೆಯ ದಿನಾಂಕ ಆಗಸ್ಟ್ 31, 2026. ಅರ್ಹ ವಿದ್ಯಾರ್ಥಿಗಳು ಸಮಯಕ್ಕೆ ಅರ್ಜಿ ಸಲ್ಲಿಸಿ ಲಾಭ ಪಡೆಯಬಹುದು.
SSP ವಿದ್ಯಾರ್ಥಿವೇತನ ಎಂದರೇನು?
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು (ಸಾಮಾಜಿಕ ಕಲ್ಯಾಣ, ಹಿಂದುಳಿದ ವರ್ಗಗಳು, ಬುಡಕಟ್ಟು, ಅಲ್ಪಸಂಖ್ಯಾತರು ಇತ್ಯಾದಿ) ಜಾರಿಗೊಳಿಸುವ ಪ್ರಿ-ಮ್ಯಾಟ್ರಿಕ್ ಮತ್ತು ಪೋಸ್ಟ್-ಮ್ಯಾಟ್ರಿಕ್ ವಿದ್ಯಾರ್ಥಿವೇತನಗಳನ್ನು ಒಂದೇ ಪ್ಲಾಟ್ಫಾರ್ಮ್ನಲ್ಲಿ ನಿರ್ವಹಿಸಲು SSP (State Scholarship Portal) ಅಭಿವೃದ್ಧಿಪಡಿಸಲಾಗಿದೆ.
1ನೇ ತರಗತಿಯಿಂದ ಪದವಿ ಮತ್ತು ಅದಕ್ಕಿಂತ ಮೇಲಿನ ಕೋರ್ಸ್ಗಳ ವಿದ್ಯಾರ್ಥಿಗಳು ಅರ್ಹತೆಯನ್ನು ಪೂರೈಸಿದರೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ.?
ವಿದ್ಯಾರ್ಥಿಗಳು ಎರಡು ವಿಧಾನಗಳಲ್ಲಿ ಅರ್ಜಿ ಸಲ್ಲಿಸಬಹುದು. ಹತ್ತಿರದ ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಕಂಪ್ಯೂಟರ್ ಸೆಂಟರ್ಗೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಅಥವಾ ಮನೆಯಿಂದಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಆನ್ಲೈನ್ ಅರ್ಜಿ ಹಂತಗಳು:
1. ಅಧಿಕೃತ SSP ಪೋರ್ಟಲ್ಗೆ ಭೇಟಿ ನೀಡಿ.
2. ಹೊಸ ಖಾತೆ ರಚಿಸಿ ಅಥವಾ ಈಗಾಗಲೇ ಇದ್ದರೆ ಲಾಗಿನ್ ಮಾಡಿ.
3. ತರಗತಿವಾರು ಅಥವಾ ಸಂಬಂಧಿತ ಲಿಂಕ್ ಮೇಲೆ ಕ್ಲಿಕ್ ಮಾಡಿ.
4. ವೈಯಕ್ತಿಕ, ಶೈಕ್ಷಣಿಕ ಮತ್ತು ಇತರ ವಿವರಗಳನ್ನು ಭರ್ತಿ ಮಾಡಿ, ದಾಖಲೆಗಳನ್ನು ಅಪ್ಲೋಡ್ ಮಾಡಿ.
5. Submit ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
ಅಧಿಕೃತ ಅರ್ಜಿ ಲಿಂಕ್ಗಳು:
ಪ್ರಿ-ಮ್ಯಾಟ್ರಿಕ್: https://ssp.karnataka.gov.in
ಪೋಸ್ಟ್-ಮ್ಯಾಟ್ರಿಕ್: https://ssp.postmatric.karnataka.gov.in
ಅಗತ್ಯ ದಾಖಲೆಗಳು.?
ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ:
1. ವಿದ್ಯಾರ್ಥಿಯ ಆಧಾರ್ ಕಾರ್ಡ್
2. ಜಾತಿ ಮತ್ತು ಆದಾಯ ಪ್ರಮಾಣಪತ್ರ
3. ಶಾಲಾ/ಕಾಲೇಜು ದಾಖಲಾತಿ ದಾಖಲೆ
4. ವಿಕಲಚೇತನರಾಗಿದ್ದಲ್ಲಿ UDID ಗುರುತಿನ ಸಂಖ್ಯೆ
5. ಮೊಬೈಲ್ ನಂಬರ್
ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಕಡ್ಡಾಯ. DBT ಮೂಲಕ ಹಣ ನೇರವಾಗಿ ಖಾತೆಗೆ ಜಮಾ ಆಗುವುದರಿಂದ ಆಧಾರ್-ಬ್ಯಾಂಕ್ ಸೀಡಿಂಗ್ ಅನ್ನು ಖಚಿತಪಡಿಸಿಕೊಳ್ಳಿ.
ವಿದ್ಯಾರ್ಥಿವೇತನ ಮೊತ್ತ ಮತ್ತು ಸಹಾಯವಾಣಿ.?
ಇಲಾಖೆ ಮತ್ತು ತರಗತಿವಾರು ವಿದ್ಯಾರ್ಥಿವೇತನ ಮೊತ್ತ ವಿಭಿನ್ನವಾಗಿದೆ. ನಿಖರ ಮೊತ್ತಕ್ಕಾಗಿ ಸಂಬಂಧಪಟ್ಟ ಇಲಾಖೆಯ ಸಹಾಯವಾಣಿಗೆ ಸಂಪರ್ಕಿಸಿ. ಸಾಮಾನ್ಯ ಸಹಾಯವಾಣಿ: 1902.
ಅರ್ಜಿ ಸಲ್ಲಿಸಿದ ನಂತರ ಸಂಸ್ಥೆ ಮಟ್ಟದಲ್ಲಿ ಪರಿಶೀಲನೆ ನಡೆಯುತ್ತದೆ. ಸ್ಥಿತಿ ಪರಿಶೀಲಿಸಲು ಪೋರ್ಟಲ್ನಲ್ಲಿ ಲಾಗಿನ್ ಮಾಡಿ ನೋಡಬಹುದು. ಆರ್ಥಿಕ ಹಿಂದುಳಿದ ವಿದ್ಯಾರ್ಥಿಗಳು ಈ ಅವಕಾಶವನ್ನು ಬಳಸಿಕೊಂಡು ಶಿಕ್ಷಣ ಮುಂದುವರಿಸಬಹುದು.
ಕೊನೆಯ ದಿನಾಂಕ ಮುಗಿಯುವ ಮೊದಲು ಅರ್ಜಿ ಸಲ್ಲಿಸಿ, ಅಗತ್ಯ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ.
DBT ಬ್ಯಾಂಕ್ ಲಿಂಕಿಂಗ್ (ಆಧಾರ್ ಸೀಡಿಂಗ್) ಹೇಗೆ ಮಾಡುವುದು?
ಸರ್ಕಾರಿ ಯೋಜನೆಗಳು (SSP ವಿದ್ಯಾರ್ಥಿವೇತನ, ಪಿಎಂ ಕಿಸಾನ್, ಗೃಹಲಕ್ಷ್ಮಿ ಇತ್ಯಾದಿ) ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲು ಆಧಾರ್-ಬ್ಯಾಂಕ್ ಲಿಂಕ್ (Aadhaar Seeding) ಕಡ್ಡಾಯ. ಇದನ್ನು NPCI Mapper ಮೂಲಕ ಮಾಡಲಾಗುತ್ತದೆ.
1. ಬ್ಯಾಂಕ್ ಶಾಖೆಗೆ ಹೋಗಿ ಮಾಡುವುದು.?
1. ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ.
2. Aadhaar Seeding Consent Form (DBT/APB ಫಾರ್ಮ್) ಕೇಳಿ.
3. ಆಧಾರ್ ನಂಬರ್, ಬ್ಯಾಂಕ್ ಖಾತೆ ನಂಬರ್ ಭರ್ತಿ ಮಾಡಿ.
4. ಆಧಾರ್ ಕಾರ್ಡ್ ನಕಲು + ಪಾಸ್ಬುಕ್ ತೋರಿಸಿ.
5. ಫಾರ್ಮ್ ಸಲ್ಲಿಸಿ, ರಸೀದಿ ಪಡೆಯಿರಿ.
ಸಾಮಾನ್ಯವಾಗಿ 2–7 ದಿನಗಳಲ್ಲಿ ಲಿಂಕ್ ಆಗುತ್ತದೆ.
2. ಆನ್ಲೈನ್ ಮೂಲಕ (ನೆಟ್ ಬ್ಯಾಂಕಿಂಗ್ / ಮೊಬೈಲ್ ಆ್ಯಪ್).?
1. ನಿಮ್ಮ ಬ್ಯಾಂಕ್ನ ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಆ್ಯಪ್ಗೆ ಲಾಗಿನ್ ಮಾಡಿ.
2. “Aadhaar Update” / “Aadhaar Linking” / “Update Aadhaar” ಆಯ್ಕೆ ಮಾಡಿ.
3. 12 ಅಂಕಿಯ ಆಧಾರ್ ನಂಬರ್ ನಮೂದಿಸಿ.
4. OTP ಮೂಲಕ ದೃಢೀಕರಿಸಿ.
5. ಸಬ್ಮಿಟ್ ಮಾಡಿ.
SBI – YONO App ಅಥವಾ onlinesbi.sbi
ಇತರ ಬ್ಯಾಂಕ್ಗಳಲ್ಲೂ ಇದೇ ರೀತಿ ಇರುತ್ತದೆ.
3. NPCI BASE ಪೋರ್ಟಲ್ ಮೂಲಕ (ಸ್ವಂತವಾಗಿ).?
1. NPCI ಅಧಿಕೃತ ಪೋರ್ಟಲ್ಗೆ ಹೋಗಿ (Bharat Aadhaar Seeding Enabler).
2. ಆಧಾರ್ ನಂಬರ್ ನಮೂದಿಸಿ.
3. ಬ್ಯಾಂಕ್ ಆಯ್ಕೆ ಮಾಡಿ + ಖಾತೆ ನಂಬರ್ ನಮೂದಿಸಿ.
4. OTP ಮೂಲಕ ದೃಢೀಕರಿಸಿ.
ಸ್ಥಿತಿ ಪರಿಶೀಲಿಸುವುದು ಹೇಗೆ.?
myAadhaar ಪೋರ್ಟಲ್ → Bank Seeding Status
ಅಥವಾ *99*99# ಡಯಲ್ ಮಾಡಿ (ಆಧಾರ್ ರಿಜಿಸ್ಟರ್ ಮೊಬೈಲ್ನಿಂದ)
NPCI BASE ಪೋರ್ಟಲ್ನಲ್ಲಿ ಸಹ ಪರಿಶೀಲಿಸಬಹುದು.
ಮುಖ್ಯ ಸಲಹೆಗಳು.?
- ಒಂದು ಆಧಾರ್ಗೆ ಒಂದೇ ಬ್ಯಾಂಕ್ ಖಾತೆ DBTಗೆ ಮ್ಯಾಪ್ ಆಗುತ್ತದೆ (ಕೊನೆಯದಾಗಿ ಸೀಡ್ ಮಾಡಿದ ಖಾತೆ).
- ಹಳೆಯ ಖಾತೆ ಮುಚ್ಚಿದ್ದರೆ ಹೊಸ ಖಾತೆಗೆ ಮತ್ತೆ ಸೀಡ್ ಮಾಡಿಸಿ.
- SSP ವಿದ್ಯಾರ್ಥಿವೇತನಕ್ಕೆ ಖಂಡಿತವಾಗಿ ಆಧಾರ್-ಬ್ಯಾಂಕ್ ಲಿಂಕ್ ಇರಬೇಕು. ಇಲ್ಲದಿದ್ದರೆ ಹಣ ಜಮಾ ಆಗುವುದಿಲ್ಲ.
ಯಾವುದೇ ಸಮಸ್ಯೆ ಇದ್ದರೆ ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ಅಥವಾ 1902 (SSP ಸಹಾಯವಾಣಿ) ಸಂಪರ್ಕಿಸಿ.
ಹೀರೋ HF ಡಿಲಕ್ಸ್ ಬೆಲೆ ಭಾರೀ ಇಳಿಕೆ: ಈಗ ಕೇವಲ ₹59,999ಕ್ಕೆ ಬೈಕ್! | HF Deluxe Price 2026